ಬೆಂಗಳೂರು; ನ೧: ನಟ ಡಾಲಿ ಧನಂಜಯ ಅವರು ರಾಜ್ಯೋತ್ಸವದ ದಿನದಂದೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟ ಡಾಲಿ ಧನಂಜಯ ಅವರು ಶಿಘ್ರವೇ ಮದುವೆಯಾಗುವುದನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಭವಿಷ್ಯದ ಮಡದಿಯ ಜೊತೆ ನಿಂತುಕೊಂಡುಪೊಸ್ ಕೊಟ್ಟಿರೊ ಪೊಸ್ಟರ್ ಗಳನ್ನ ಹಾಕಿದ್ದಾರೆ.ಡಾಲಿ ಧನಂಜಯ ಅವರ ಮಡದಿಯ ಹೆಸರು ಧನ್ಯ . ಇವರು ಡಾಕ್ಟರ್ ಆಗಿದ್ದು ತನ್ನ ಬಹುದಿನಗಳ ಬ್ಯಾಚುಲರ್ ಲೈಪ್ಗೆ ಶೀಘ್ರದಲ್ಲೇ ಗುಡ್ ಬೈ ಹೇಳಲಿದ್ದಾರೆ.

ರಾಜ್ಯೋತ್ಸವದ ಪ್ರಯುಕ್ತ ವಾಗಿ ನಟ ಧನಂಜಯ ಅವರು ತನ್ನ ಭವಿಷ್ಯದ ಮಡದಿಗೆ ಕವಿತೆಯೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ನನ್ನವಳ ಪ್ರತಿ ನಗುವ ಸೆರೆಹಿಡಿದು
ಹೂಮಾಲೆಯಂತೆ ಪೋಣಿಸಿದಾಗ
ಆದವು ನದಿ ಸಾಗರ!

ನನ್ನವಳ ಪ್ರತಿ ನಗುವ ಸೆರೆಹಿಡಿದು
ಆಗಸದ ತುಂಬೆಲ್ಲಾ ತೂರಿದಾಗ
ಆದವು ಚಂದ್ರ ನಕ್ಷತ್ರ!

ನನ್ನವಳ ಪ್ರತಿ ನಗುವ ಸೆರೆಹಿಡಿದು
ಬಣ್ಣದಲದ್ದಿ ಕುಂಚದಿ ಗೀಚಲು
ಆದವು ಬೆಡಗು ಬಿನ್ನಾಣ!

ನನ್ನವಳ ಪ್ರತಿ ನಗುವ ಸೆರೆಹಿಡಿದು
ಎದೆಎದೆಯಲಿ ಬಿತ್ತಿ ಬೆಳೆಯಲು
ಆದರು ರತಿ ಮನ್ಮಥರು!

ನಾನು ಧನ್ಯ ❤️