ಬಳ್ಳಾರಿ : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬಳ್ಳಾರಿ ಜಿಲ್ಲಾ ಜನಜಾಗೃತಿ ಸಂಘ , ಬಳ್ಳಾರಿ ಜಿಲ್ಲಾ ವಾಹನ ಚಾಲಕರ ಸಂಘ ಅಧ್ಯಕ್ಷರಾದ ಶ್ರೀ ಹುಂಡೇಕರ್ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಬಿ.ಕೆ.ಎಸ್ ಆಸ್ಪತ್ರೆ ಮುಂಭಾಗದಲ್ಲಿ ಶ್ರೀ ಬಿ.ಕೆ ಸುಂದರ್ ಸರ್ ಮತ್ತು ಬಿ.ಕೆ ಶ್ರೀಕಾಂತ್ ಸರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಅನ್ನ ದಾಸೋಹ ಮತ್ತು ಚಾಲಕರಿಗೆ ವಸ್ತ್ರಗಳನ್ನು ಹಂಚುವ ಮೂಲಕ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು ತಿಳಿಸಿದಳ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಚೈತನ್ಯ ಕಾಲೇಜ್, ಎಸ್ ಎನ್ ಪೇಟೆ , ಹಳೆ ಬಸ್ ನಿಲ್ದಾಣ, ಬಳ್ಳಾರಿ ಹೃದಯಲಯ ಆಸ್ಪತ್ರೆ, ನೆಹರು ಕಾಲೋನಿ , ಗಾಂಧಿನಗರ್ , ಶ್ರೀರಾಂಪುರ್ ಕಾಲೋನಿ , ವಿಶಾಲ್ ನಗರ, ಆಂಧ್ರಲ್ ಡಿ.ಸಿ ಕ್ಯಾಂಪ್ ಮತ್ತು ವಿವಿಧ ಬಡಾವಣೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಹಬ್ಬವನ್ನು ನಮ್ಮ ಸಂಘಟನೆಯ ಮುಖಂಡರುಗಳ ಜೊತೆಯಲ್ಲಿ ಆಚರಿಸಲಾಯಿತು. ಮತ್ತು #ಅನ್ನ #ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.